ಅಧೂರಾ
ನೀಲ್ಗಿರಿ ವ್ಯಾಲಿ ಸ್ಕೂಲ್-ನಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಗಳಿಗೂ , ಹತ್ತು ವರ್ಷದ ಹೊಸ ವಿದ್ಯಾರ್ಥಿ ವೇದಾಂತ್-ಗೂ ಏನೋ ಸಂಬಂಧ ಇರುವ ಹಾಗಿದೆ. ೨೦೦೭ನೇ ವರ್ಗ ಶಾಲೆಗೆ ರೀಯೂನಿಯನ್-ಗೆಂದು ಬಂದಾಗ, ಶಾಲೆಯ ಮಾಜಿ ವಿದ್ಯಾರ್ಥಿ ಅಧಿರಾಜ್ ಜೈಸಿಂಗ್ ತಾನು ಹದಿನೈದು ವರ್ಷಗಳ ಹಿಂದೆ ಮಾಡಿದ್ದನ್ನು ಎದುರಿಸಬೇಕಾಗುತ್ತದೆ. ಅಧಿರಾಜ್ ಮತ್ತು ವೇದಾಂತ್ ಎದುರುಬದುರಾದಾಗ ಕಥೆ ಭಯಾನಕ ತಿರುವು ಪಡೆಯುತ್ತದೆ. ಕರಾಳ ರಹಸ್ಯವೊಂದು ಶಾಲೆಯಲ್ಲಿನ ಪ್ರತಿಯೊಬ್ಬರಿಗೂ ಜೀವಭಯ ಹುಟ್ಟಿಸುತ್ತದೆ.
