ಲಾ
ಒಬ್ಬ ಮಹಿಳೆ ಅನ್ಯಾಯದ ವಿರುದ್ಧ ನ್ಯಾಯಬದ್ಧವಾಗಿ ನಡೆಸುವ ಹೋರಾಟದ ಕಥಾಹಂದರವೇ "ಲಾ". ಇದೊಂದು ನಾಯಕಿ ಪ್ರಧಾನ ಚಿತ್ರ. ಇಲ್ಲಿ ಕಥಾನಾಯಕಿ ಲಾ ಗ್ರಾಜುಯೇಟ್. ಹೆಣ್ಣಿನ ಮೇಲೆ ನಡೆಸೋ ದೌರ್ಜನ್ಯ, ಅದರಿಂದ ಆಕೆ ಅನುಭವಿಸುವ ನೋವು, ಏನೂ ಮಾಡಲಾಗದ ಅಸಹಾಯಕತೆ, ಹೆಣ್ಣು ಎಂದರೆ ಎಲ್ಲವನ್ನೂ ಸಹಿಸಿಕೊಂಡು ಹೋಗುವವಳು ಅನ್ನೋ ಧೋರಣೆ ಇವೆಲ್ಲವಕ್ಕೂ ಲಾ ವ್ಯತಿರಿಕ್ತ. ಹಿಂದೆಂದೂ ಆಗಿರದ ಒಂದು ಪ್ರಯೋಗ ಈ ಕಥೆಯಲ್ಲಿದೆ.
